ಭಾರತದ
ಗೋ
ತಳಿಗಳಲ್ಲಿರುವ
ಮೂರು
ವಿಭಾಗಗಳಲ್ಲಿ ಅಮೃತಮಹಲ್ ‘ಕೆಲಸಗಾರ
ತಳಿ’
ವರ್ಗಕ್ಕೆ
ಸೇರಿದವು.
ಮೂಲತಃ
ಕರ್ನಾಟಕದ
ಹಾಸನ,
ಚಿಕ್ಕಮಗಳೂರು
ಮತ್ತು ಚಿತ್ರದುರ್ಗ
ಜಿಲ್ಲೆಯವುಗಳಾದ
ಇವುಗಳನ್ನುವಿಶೇಷವಾಗಿ
ಮೈಸೂರು
ಅರಸರು
೧೫೭೨
ರಿಂದ
೧೬೩೬ರ
ಕಾಲಘಟ್ಟದಲ್ಲಿ
ಅಭಿವೃದ್ಧಿಗೊಳಿಸಿದರು.
ಯುದ್ಧಗಳ
ಸಂದರ್ಭದಲ್ಲಿ
ಸಾಮಾನು
-
ಸರಂಜಾಮುಗಳ
ಸಾಗಾಟಕ್ಕಾಗಿ
ಈ
ತಳಿಯ
ಅಭಿವೃದ್ಧಿಯಾಯಿತು.
ಮಾತ್ರವಲ್ಲ,
ತೋಟಗಳಲ್ಲಿ
ಇವು
ಇಂದಿಗೂ
ಕಾವಲು
ನಾಯಿಯ
ಕೆಲಸವನ್ನು
ಮಾಡುತ್ತಿವೆ.
ಸಾಕಿದ
ಒಡೆಯನಿಗೆ
ಅತ್ಯಂತನಿಷ್ಠೆಯನ್ನು
ತೋರಿಸುವ
ಅಮೃತಮಹಲ್
ತಳಿಗಳು
ತಮ್ಮ
ಒಡೆಯನಿಗಾಗಿ
ಯಾವುದೇ
ಕೆಲಸವನ್ನು
ಮಾಡಿಕೊಡಲು
ಸಿದ್ಧವಾಗಿರುತ್ತವೆ.
ಮೈಸೂರು
ಅರಸರ
ಕಾಲದಲ್ಲಿ
ಇವು
‘ಬೆಣ್ಣೆ
ಚಾವಡಿ’
ಎನ್ನುವ
ಹೆಸರಿನಿಂದ
ಪ್ರಸಿದ್ಧವಾಗಿದ್ದವು.
ಮುಂದೆ
ಹೈದರಾಲಿಯ
ಮಗ
ಟಿಪ್ಪೂಸುಲ್ತಾನನು
ಹಳೇ
ಮೈಸೂರು
ಪ್ರದೇಶದಲ್ಲಿ
ಇವುಗಳನ್ನು
ಬೆಳೆಸಿ
‘ಅಮೃತಮಹಲ್’
ಎನ್ನುವ
ನಾಮಕರಣ
ಕೂಡ ಮಾಡಿದನು.
ಟಿಪ್ಪುವಿನ
ದಿವಾನರಾಗಿದ್ದ
‘ಪೂರ್ಣಯ್ಯ’ನವರು
ಈ
ಅಮೃತಮಹಲ್
ತಳಿಗಳನ್ನು
ತಮಿಳುನಾಡಿನಲ್ಲಿ
ಪಸರಿಸುವುದಕ್ಕೆ
ಕಾರಣೀಕರ್ತರು.
ಇಂದಿಗೂ
ತಮಿಳುನಾಡಿನ
ಕೆಲಭಾಗಗಳಲ್ಲಿ
ಅಮೃತಮಹಲ್
ತಳಿಯ
ದನ
ಕರುಗಳನ್ನು
‘ಪೂರ್ಣಯ್ಯನ
ದನ’ಗಳೆಂದೇ
ಕರೆಯುತ್ತಾರೆ.
ಮೈಸೂರು
ಅರಸರ
ಹಾಗೂ
ಹೈದರಾಲಿ,
ಟಿಪ್ಪುವಿನ
ಸೈನ್ಯದಲ್ಲಿ
ಈ
ತಳಿಗಳ
‘ಬಂಜಾರ’ವೆಂಬ
ದಳಪ್ರಮುಖವಾಗಿತ್ತು.
ಕೇವಲ
೨೩೭
ಅಮೃತಮಹಲ್
ತಳಿಯ
ಎತ್ತುಗಳು
೩೦೦೦ದಷ್ಟಿದ್ದ
ಹೈದರಾಬಾದ್
ನಿಜಾಮನ
ಸೈನ್ಯವನ್ನು
ಸೋಲಿಸಿ
ಓಡಿಸಿರುವುದು
ಇಂದು
ಇತಿಹಾಸ
ಹಾಗೂ
ಅವುಗಳ
ಸಾಮರ್ಥ್ಯವನ್ನು
ತೋರಿಸಿ
ಕೊಡುತ್ತದೆ.
ಮೊದಲ
ಹಾಗೂ
ದ್ವಿತೀಯ
ಮಹಾಯುದ್ಧಗಳಲ್ಲಿ
ಯುದ್ಧ
ಪರಿಕರಗಳನ್ನು
ಸಾಗಿಸಲು
ಈ
ತಳಿಯ
ಎತ್ತುಗಳು
ಉಪಕರಿಸಿದ್ದವು
ಎನ್ನುವುದನ್ನು
ವಿಶ್ವಯುದ್ಧದ
ಇತಿಹಾಸ
ಹೇಳುತ್ತದೆ.
ಗಂಟೆಗಳ
ಕಾಲ
ಆಹಾರ,
ನೀರು
ಸೇವಿಸದೇ
ಸಾಮಾನು
ಸಾಗಿಸುವುದು
ಈ
ತಳಿಯ
ವೈಶಿಷ್ಟ್ಯ.
ಹಾಸನ,
ದಕ್ಷಿಣಕನ್ನಡದ
ಕೆಲವು
ಭಾಗ,
ಚಿಕ್ಕಮಗಳೂರು,
ಹಳೇ
ಮೈಸೂರು
ಪ್ರದೇಶ,
ಮಂಡ್ಯ
ಮೊದಲಾದೆಡೆ
ಈ
ತಳಿಯ
ಸಂವರ್ಧನೆಗಾಗಿ
‘ಅಮೃತಮಹಲ್
ಕಾವಲುಭೂಮಿ’
ಬಿಟ್ಟಂತಹ
ಉದಾಹರಣೆಗಳು
ನೋಡಲು ಸಿಗುತ್ತವೆ.
ಆದುದರಿಂದ
ನಮ್ಮ
ಅವಗಣನೆಯಿಂದಾಗಿ
ಆ
ಕಾವಲು
ಭೂಮಿಗಳು
ಅತಿಕ್ರಮಣವಾಗುತ್ತಿವೆ.
ಒಳ್ಳೆಯ
ತಳಿಗಳು
ಕೂಡ
ಅಂತ್ಯವಾಗುವ
ನಿಟ್ಟಿನಲ್ಲಿವೆ.
ಈಗಲಾದರೂ
ಅಮೃತಮಹಲ್
ತಳಿಗಳನ್ನು
ವ್ಯವಸ್ಥಿತವಾಗಿ
ಉಪಯೋಗಿಸಿದಲ್ಲಿ
ತನ್ಮೂಲಕ
ಇಂದಿನ
ಬತ್ತುತ್ತಿರುವ
ಇಂಧನ
ವ್ಯವಸ್ಥೆಗೆ
ಹಾಗೂ
ಕಾರ್ಮಿಕ
ಸಮಸ್ಯೆಗೆ
ಪರ್ಯಾಯವಾಗಬಹುದು.
No comments:
Post a Comment